ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘಇಂದಿನಿಂದ ಬೆಳ್ಳಿಹಬ್ಬ ಸಂಭ್ರಮ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಜನವರಿ 31 , 2015
ಜನವರಿ 31, 2015

ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘಇಂದಿನಿಂದ ಬೆಳ್ಳಿಹಬ್ಬ ಸಂಭ್ರಮ

ಸಿದ್ದಾಪುರ : ತಾಲೂಕಿನ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ದೊಡ್ಮನೆ ಇದರ ಬೆಳ್ಳಿಹಬ್ಬ ಸಂಭ್ರಮ-2015 ಜ.31, ಫೆ.1 ಹಾಗೂ 2ರಂದು ದೊಡ್ಮನೆ ಪ್ರೌಢಶಾಲೆಯ ರಾಮಕಷ್ಣ ಹೆಗಡೆ ವೇದಿಕೆಯಲ್ಲಿ ನಡೆಯಲಿದೆ ಎಂದು ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.

ಅವರು ಪಟ್ಟಣದ ಟಿ.ಎಂ.ಎಸ್‌ನಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಕ್ಷಗಾನದ ವಿವಿಧ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ 25ವರ್ಷ ಪೂರೆಸಿದೆ. ಅದರ ಸವಿ ನೆನಪಿಗಾಗಿ ಸನ್ಮಾನ, ವಿಚಾರ ಗೋಷ್ಠಿ, ಯಕ್ಷಗಾನ ಹಾಗೂ ಅದರ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಜ.31ರಂದು ಮಧ್ಯಾಹ್ನ 3ಕ್ಕೆ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಉದ್ಘಾಟಿಸುವರು. ಸಾಹಿತಿ ಶಾ.ಮಂ. ಕಷ್ಣರಾಯ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಶಾಂತಾರಾಮ ಹೆಗಡೆ ಶಿಗೇಹಳ್ಳಿ, ಬಸವರಾಜ ಹೂಗಾರ, ಎಸ್.ಬಿ.ಗೌಡರ್ ಕಲ್ಲೂರು, ಭೀಮಣ್ಣ ಟಿ. ನಾಯ್ಕ, ಸತ್ಯಾನಂದ ಕೆರಾನ್, ಎಂ.ಎಸ್.ಜೋಶಿ ಶಿರಸಿ, ಗಂಗೆ ಗೌಡ ಉಪಸ್ಥಿತರಿರುತ್ತಾರೆ. ಟಿ.ಎಂ.ಎಸ್.ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸುವರು.

ಸನ್ಮಾನ ಮತ್ತು ಯಕ್ಷಗಾನ ಶಂಕರ ಭಾಗ್ವತ್ ಗಿರಿಗಡ್ಡೆ, ಅಶೋಕ ಭಟ್ಟ ಸಿದ್ದಾಪುರ, ಎಸ್.ಜಿ.ಹೆಗಡೆ ದೊಡ್ಮನೆ ಅವರಿಗೆ ಸನ್ಮಾನ, ಯಕ್ಷಚಂದನ ದಂಟಕಲ್ ಅವರಿಂದ ಅಭಿಮನ್ಯು ಕಾಳಗ ಹಾಗೂ ಚಿಟ್ಟಾಣಿ ಸಂಗಡಿಗರಿಂದ ವಿಷಯೆ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಫೆ. 1ರಂದು ಮಧ್ಯಾಹ್ನ 3ಕ್ಕೆ ಯಕ್ಷಗಾನ ಗೋಷ್ಠಿಯನ್ನು ಸಾಹಿತಿ ಎಲ್.ಎಸ್.ಶಾಸ್ತ್ರಿ ನಾಜಗಾರ ಬೆಳಗಾವಿ ಉದ್ಘಾಟಿಸುವರು. ಶ್ರೀಧರ ಭಟ್ಟ ಗಡಿಹಿತ್ಲ ಅಧ್ಯಕ್ಷತೆವಹಿಸುವರು. ವಿ.ಉಮಾಕಾಂತ ಭಟ್ಟ ಹಾಗೂ ವಾಸುದೇವ ರಂಗ ಭಟ್ಟ ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಲಿದ್ದಾರೆ. ಪ್ರೊ.ಎಂ.ಹೆಗಡೆ ದಂಟಕಲ್ ಉಪಸ್ಥಿತರಿರುತ್ತಾರೆ. ಸಂಜೆ 5ರಿಂದ ಭಗು ಶಾಪ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ತಿಮ್ಮಪ್ಪ ಭಟ್ಟ ಸಾರಂಗ ಅಧ್ಯಕ್ಷತೆಯಲ್ಲಿ ವಿವಿಧ ಕಲಾ ಸಂಸ್ಥೆಗಳಿಗೆ ರಂಗ ಗೌರವ ಸಲ್ಲಿಸಲಾಗುತ್ತಿದೆ. ಕಷ್ಣ ಯಾಜಿ ಬಳ್ಕೂರು ಸಂಗಡಿಗರಿಂದ ಐರಾವತ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಫೆ.2ರಂದು ಮಧ್ಯಾಹ್ನ 3ಕ್ಕೆ ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ. ಪ್ರಮೋದ ಹೆಗಡೆ ಯಲ್ಲಾಪುರ ಅವರು ಅಭಿನಂದನಾ ಭಾಷಣ ಮಾತನಾಡಲಿದ್ದಾರೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ನಾರಾಯಣ ಶಾನಭಾಗ ಕುಮಟಾ, ಜಿ.ಜಿ.ಹೆಗಡೆ ಬಾಳಗೋಡ, ಎಫ್.ಎನ್.ಹರಗಿ, ರವಿ ಹೆಗಡೆ ಹೂವಿನಮನೆ, ಎಂ.ಆರ್.ಹೆಗಡೆ ನೇಗಾರ್ ಉಪಸ್ಥಿತರಿರುತ್ತಾರೆ.

ಸನ್ಮಾನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸ್ಥಳೀಯ ವ್ಯಕ್ತಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ ಉಡುಪಿ ಅಧ್ಯಕ್ಷತೆಯಲ್ಲಿ ಬನ್ನಂಜೆ ಸಂಜೀವ ಸುವರ್ಣ ಮತ್ತು ತಂಡದವರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದೆ.

ಎಂ.ಕೆ.ನಾಯ್ಕ ಹೊಸಳ್ಳಿ, ಜಿ.ಕೆ.ಭಟ್ಟ ಕಶಿಗೆ,ಅರುಣಕುಮಾರ ಬೆಂಕ್ಟಳ್ಳಿ ಸಂವಾದಕರಾಗಿ ಪಾಲ್ಗೊಳ್ಳುವರು. ನಂತರ ಕೊಂಡದಕುಳಿ ರಾಮಚಂದ್ರ ಹೆಗಡೆ ಸಂಗಡಿಗರಿಂದ ಸತ್ಯಹರಿಶ್ಚಂದ್ರ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಆರ್.ಎಂ.ಹೆಗಡೆ ಬಾಳೇಸರ ತಿಳಿಸಿದರು.

ಎಂ.ಆರ್.ಹೆಗಡೆ ನೇಗಾರ, ಶ್ರೀಧರ ಭಟ್ಟ ಗಡಿಹಿತ್ಲ, ಜಿ.ಜಿ.ಹೆಗಡೆ ಬಾಳಗೋಡ, ಸುಬ್ರಹ್ಮಣ್ಯ ಹೆಗಡೆ ಇಳಿಮನೆ, ಕೇಶವ ಹೆಗಡೆ ಕಿಬ್ಳೆ ಉಪಸ್ಥಿತರಿದ್ದರು.



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
K.chandrashekar Bhat(2/1/2015)
i like this progress




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ